ಮಂಗಳೂರು: ಖಾಸಗಿ ಬಸ್ ನಡಿಗೆ ಬಿದ್ದು ಕಂದಮ್ಮ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.25. ನಗರದ ಬೆಂದೂರ್‌ವೆಲ್‌ ನಲ್ಲಿ ಖಾಸಗಿ ಬಸ್‌ ನಡಿಗೆ ಮಗುವೊಂದು ಬಿದ್ದು ಮೃತಪಟ್ಟು, ಮಗುವಿನ ತಾಯಿ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ಹಾರ್ದಿಕ್‌(7), ಗಾಯಾಳು ತಾಯಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಇಂದು ಅಪರಾಹ್ನ 2.45 ರ ಹೊತ್ತಿಗೆ ಸ್ವಾತಿ ತನ್ನ ಪುಟ್ಟ ಮಗನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಸ್ಕೂಟಿಯ ಹ್ಯಾಂಡಲ್‌ ಬಸ್‌ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ.

Also Read  ಬುರ್ಖಾ ಏಕೆ ಧರಿಸಿಲ್ಲ ಎಂದು ವಿದ್ಯಾರ್ಥಿನಿಗೆ ಗದರಿದ ಆರೋಪ..! - ಬಸ್ ಚಾಲಕ ಅಮಾನತು

error: Content is protected !!
Scroll to Top