ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಕ್ಕೆ ಬಾರಿಸಿದ ಸಿದ್ದರಾಮಯ್ಯ

(ನ್ಯೂಸ್ ಕಡಬ) Newskadaba.com: ಬೆಂಗಳೂರು; ಮಾ.25, ಕಾಂಗ್ರೆಸ್ ಕಾರ್ಯಕರ್ತ ಮತ್ತು ಶಾಸಕ ರಾಮಪ್ಪ ಅಭಿಮಾನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದಾರೆ. ರಾಮಪ್ಪ ಅವರ ಬೆಂಬಲಿಗರು ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಯ್ಯರ ಮನೆ‌ಮುಂದೆ ಬಂದು ಅವರನ್ನು ಸುತ್ತುವರೆದು, ತಮ್ಮ ನಾಯಕನಿಗೆ ಕಾಂಗ್ರೆಸ್​ ಟಿಕೆಟ್​ ನೀಡಬೇಕೆಂದು ಒತ್ತಾಯಿಸಿದ್ದು, ಈ ವೇಳೆ ಸಿಎಂ ಮನೆಮುಂದೆ ಭಾರೀ ತಳ್ಳಾಟ ಹಾಗೂ ನೂಕಾಟ ಉಂಟಾಗಿದೆ.

ಆಗ ರಾಮಪ್ಪ ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದ ಸಿದ್ದರಾಮಯ್ಯ ಟಿಕೆಟ್ ಗೆ ಸರ್ವೆ ರಿಪೋರ್ಟ್ ಬರಲಿ ಎಂದು ಹೇಳಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯನವರು ಹೊರಡುವಾಗ ಮತ್ತೆ ತಳ್ಳಾಟ ನೂಕಾಟ ಆರಂಭವಾಗಿದೆ. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ತಳ್ಳಾಡಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.ಇದೀಗ ಸಿದ್ದರಾಮಯ್ಯ ಕೈ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ.

Also Read  ಸಾವಯವ ಗೊಬ್ಬರದತ್ತ ರೈತರ ಒಲವು   ➤ ಸಗಣಿಗೂ ಬಂತು ಬಂಗಾರದ ಬೆಲೆ…!

error: Content is protected !!
Scroll to Top