(ನ್ಯೂಸ್ ಕಡಬ)newskadaba.com ಬಂಟ್ವಾಳ, ಮಾ.25. ಧಾರ್ಮಿಕ ಕ್ಷೇತ್ರಗಳಿಗೆ ಸಮರ್ಪಣೆಗೊಂಡ ಸುವಸ್ತು ಗಳನ್ನು ಏಲಂ ಮಾಡುವುದು ಸಾಮಾನ್ಯವಾಗಿದ್ದು, ಈ ವೇಳೆ ಭಕ್ತರು ವಸ್ತುವಿನ ಮೌಲ್ಯಕ್ಕಿಂತ ಹೆಚ್ಚಿನ ದರ ಕೊಟ್ಟು ಅದನ್ನು ಪ್ರಸಾದ ರೂಪದಲ್ಲಿ ಪಡೆಯುತ್ತಾರೆ. ಮೂಲರಪಟ್ನ ಮಸೀದಿಯಲ್ಲಿ ಹಲಸಿನ ಹಣ್ಣೊಂದನ್ನು ವ್ಯಕ್ತಿಯೊಬ್ಬರು ಏಲಂನಲ್ಲಿ ಬರೋಬ್ಬರಿ 4.33 ಲಕ್ಷ ರೂ.ಗಳಿಗೆ ಪಡೆಯುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಮೂಲರಪಟ್ಣ ನವೀಕೃತ ಮಸೀದಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರಭಾಷಣವನ್ನು ಆಯೋಜಿಸಲಾಗಿದ್ದು, ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರ ಉಪನ್ಯಾಸದ ಬಳಿಕ ಮಸೀದಿಗೆ ಅರ್ಪಣೆಯಾಗಿದ್ದ ಹಲಸನ್ನು ಏಲಂ ಮಾಡುವುದಕ್ಕೆ ಅವರೇ ಪ್ರಾರಂಭಿಸಿದರು.