(ನ್ಯೂಸ್ ಕಡಬ) Newskadaba.com ಮರ್ಧಾಳ: ಮಾ.25, ಕಡಬ ತಾಲೂಕಿನ ಕೆರ್ಮಾಯಿ-ಬೊಳಂತ್ಯಡ್ಕ, ಬರಮೇಲು, ಯತ್ತೂರುಬೈಲು, ನೇಲಡ್ಕ ಎನ್.ಕೋಪ್ ಸಿಆರ್ ಸಿ ಸಂಪರ್ಕ ರಸ್ತೆಯ ಬಜಕೆರೆ ಎಂಬಲ್ಲಿ ನಿರ್ಮಾಣಗೊಳ್ಳಲ್ಲಿರುವ ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ನಿವೃತ್ತ ರೈಲ್ವೆ ಉದ್ಯೋಗಿ ಪೂವಪ್ಪ ಗೌಡರವರು ತೆಂಗಿನಕಾಯಿ ಒಡೆಯುವ ಮೂಲಕ ಶಂಸ್ಥಾಪನೆ ನೆರೆವೇರಿಸಿದರು. ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಕೃಷ್ಣ ಶೆಟ್ಟಿ ಕಡಬ, ವಾಡ್ಯಪ್ಪ ಗೌಡ, ಮೇದಪ್ಪ ಗೌಡ, ರಮೇಶ್ ಕಲ್ಪುರೆ, ಜನಾರ್ಧನ ಗೌಡ ಪುತ್ತಿಲ, ಹರೀಶ್ ಕೊಡಂದೂರು, ಈರೇಶ್, ಗಂಗಾಧರ ರೈ, ಮುತ್ತಪ್ಪ ಅಜಿಲ ಮತ್ತಿತರರು ಉಪಸ್ಥಿತಿಯಲ್ಲಿದ್ದರು.
Also Read ಜಿಲ್ಲಾ ಪಂಚಾಯತ್ ಪುತ್ತೂರು ಕಚೇರಿಯವರ ಬಳಕೆಗಾಗಿ ಬಾಡಿಗೆ ಆಧಾರದ ಮೇಲೆ ವಾಹನವನ್ನು ಪಡೆಯಲು ಟೆಂಡರ್ ಆಹ್ವಾನ