ಟಿಕ್ ಟಾಕ್ ಸ್ಟಾರ್ ಜೆಹಾನ್ ರನ್ನು ಬಲಿ ಪಡೆದ ಮೈಗ್ರೇನ್ ➤ ತಲೆನೋವು ಅಂತ ನಿರ್ಲಕ್ಷ್ಯ ಮಾಡುವ ಮುನ್ನ ಹುಷಾರ್.

(ನ್ಯೂಸ್ ಕಡಬ) Newskadaba.com ನ್ಯೂಯಾರ್ಕ್:ಮಾ.25, ಮೈಗ್ರೇನ್ ಬಗ್ಗೆ ನೀವು ಕೇಳಿರಬಹುದು. ಈ ತಲೆನೋವು ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವುದು ಹೆಚ್ಚು. ಪ್ರಪಂಚದ ಪ್ರತಿ ಏಳನೇ ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಸಾಮನ್ಯ ಆರೋಗ್ಯ ಸಮಸ್ಯೆಯಾಗಿದೆ.ಮೈಗ್ರೇನ್ ಅಂದ್ರೆ ತೀಕ್ಷ್ಣರೂಪದ ತಲೆನೋವು ಅಂತಾ ಎಲ್ಲರೂ ಅಂದುಕೊಂಡಿರುತ್ತೇವೆ.

ಆದ್ರೆ ಇದೇ ತಲೆನೋವು ಒಬ್ಬರ ಜೀವವನ್ನೇ ತೆಗೆದುಕೊಂಡುಬಿಡಬಹುದು.ಮೈಗ್ರೇನ್‌ನಿಂದಾಗಿ ಟಿಕ್‌ಟಾಕ್ ತಾರೆ ಜೆಹಾನ್ ಥಾಮಸ್ ಮರಣ ಹೊಂದಿದ್ದಾರೆ.ಜೆಹಾನ್ ಥಾಮಸ್ ಅಕಾಲಿಕ ಸಾವಿನಿಂದಾಗಿ ಅವರ ಕುಟುಂಬ ಶಾಕ್‌ನಲ್ಲಿದೆ. ಅದರಲ್ಲೂ ಇಬ್ಬರು ಪುಟಾಣಿ ಮಕ್ಕಳಾದ ಐಸಾಕ್ ಮತ್ತು ಎಲಿಜಾ ಅಮ್ಮನನ್ನ ಕಾಣದೇ ಕಂಗಾಲಾಗಿದ್ದಾರೆ. ಮೈಗ್ರೇನ್ ತಲೆನೋವು ಈಗ ಕೇವಲ ತಲೆನೋವು ಅಂತ ನಿರ್ಲಕ್ಷಿಸುವ ಹಾಗಿಲ್ಲ.

Also Read  ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ ➤ ಹೆಚ್ಚಿದ ಪೊಲೀಸ್ ಭದ್ರತೆ

 

 

 

 

 

*ಟಿಕ್‌ ಟಾಕ್ ಸ್ಟಾರ್ ಜೆಹಾನ್‌ ರನ್ನು ಬಲಿ ಪಡೆದ ಮೈಗ್ರೇನ್; *

*➤ ತಲೆನೋವು ಅಂತ ನಿರ್ಲಕ್ಷ್ಯ ಮಾಡುವ ಮುನ್ನ ಹುಷಾರ್.*

 

error: Content is protected !!
Scroll to Top