(ನ್ಯೂಸ್ ಕಡಬ)newskadaba.com ಮುಂಬೈ, ಮಾ.25. ದಕ್ಷಿಣ ಮುಂಬೈನ ವಸತಿ ಕಟ್ಟಡವೊಂದರಲ್ಲಿ 54 ವರ್ಷದ ಮಾನಸಿಕ ಅಸ್ವಸ್ಥನೋರ್ವ ನಾಲ್ವರು ನೆರೆಹೊರೆಯವರನ್ನು ಇರಿದು ಕೊಂದಿದ್ದಾರೆ ಮತ್ತು ಇನ್ನೋರ್ವನಿಗೆ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಂಟ್ ರಸ್ತೆಯಲ್ಲಿರುವ ಪಾರ್ವತಿ ಮ್ಯಾನ್ಷನ್‌ನಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವ್ಯಕ್ತಿಯ ಪತ್ನಿ ಮತ್ತು ಮಕ್ಕಳನ್ನು ಎರಡು ತಿಂಗಳ ಹಿಂದೆ ಅವರನ್ನು ತೊರೆದಿದ್ದರು. ಅಂದಿನಿಂದ ಮಾನಸಿಕವಾಗಿ ನೊಂದಿದ್ದ ಈತ ಶುಕ್ರವಾರ ಅಕ್ಕಪಕ್ಕದವರನ್ನು ಕಂಡು ಮನೆಗೆ ತೆರಳಿ ಚಾಕು ಎತ್ತಿಕೊಂಡು ಅಕ್ಕಪಕ್ಕದ ಕುಟುಂಬದ ಐವರ ಮೇಲೆ ಹಲ್ಲೆ ನಡೆಸಿದ್ದಾನೆ.
Also Read ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ