ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ      ➤  200 ರೂ. ಸಬ್ಸಿಡಿ…!

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.25. ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 200 ರೂ ಸಬ್ಸಿಡಿ ನೀಡಿಕೆಗೆ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಿಸಿಇಎ ಸಭೆ ನಡೆಯಿತು.

Also Read  ಪತಿ-ಪತ್ನಿ ನಡುವೆ ಕಲಹ, ಹಲ್ಲೆ ➤ ಇಬ್ಬರು ಮಕ್ಕಳು ಮೃತ್ಯು

error: Content is protected !!
Scroll to Top