(ನ್ಯೂಸ್ ಕಡಬ)newskadaba.com ನವದೆಹಲಿ, ಮಾ, 24. ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ಕೌಶಲ್ಯ ವೃದ್ಧಿ ತರಬೇತಿ ಅನಿವಾರ್ಯ ಎಂದು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಜನರನ್ನು ಅನಗತ್ಯವಾಗಿ ಕಸ್ಟಡಿಗೆ ಕಳುಹಿಸುವಂತಹ ಮ್ಯಾಜಿಸ್ಟ್ರೇಟ್‌ಗಳ ನ್ಯಾಯಾಂಗ ಕೆಲಸವನ್ನು ಹಿಂಪಡೆಯಬೇಕು. ಅವರನ್ನು ನ್ಯಾಯಾಂಗ ಅಕಾಡೆಮಿಗಳಿಗೆ ತರಬೇತಿಗಾಗಿ ಕಳುಹಿಸಬೇಕು ಎಂದು ಪೀಠವು ತಿಳಿಸಿದೆ.