(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.24. ಮಾದಕ ವ್ಯಸನಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಾಗೂ ಸುಮ್ಮನೆ ಕುಳಿತುಕೊಂಡಿದ್ದವರಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಘಟನೆ ಸರಣಿ ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಗಣಪತಿ ದೇವಸ್ಥಾನ ಬಳಿ ನಡೆದಿದೆ.
ಸುಮ್ಮನೆ ಕುಳಿತವರಿಗೆ ಚಾಕು ಇರಿತದ ಘಟನೆಯಿಂದ ಪ್ರಯಾಣಿಕರು ಹಾಗೂ ಇತರೆ ಸಾರ್ವಜನಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಾಂಜಾ ಸೇವನೆಯ ಮತ್ತಿನಲ್ಲಿ ಇದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ (ಸೈಕೋ) ನಡೆದುಕೊಂಡಿದ್ದಾನೆ. ಗಣಪತಿ ದೇವಸ್ಥಾನದ ಬಳಿ ಊರಿಗೆ ಹೋಗಬೇಕೆಮದು ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ಇಬ್ಬರಿಗೆ ಮದ್ಯವ್ಯಸನಿ ವ್ಯಕ್ತಿ ಏಕಾಏಕಿ ಚಾಕು ಇರಿದಿದ್ದಾರೆ. ಇನ್ನು ರಸ್ತೆಯಲ್ಲಿ ಇದ್ದವರು ಚಾಕು ಇರಿಯುವುದನ್ನು ತಡೆಯಲು ಹೋದವರಿಗೂ ಚಾಕು ಇರಿಯುವ ಮೂಲಕ ವಿಕೃತಿಯನ್ನು ಮೆರೆದಿದ್ದಾನೆ.