ಬಹ್ರೈನ್‌ನಿಂದ ಮಂಗಳೂರಿಗೆ ಆಗಮಿಸಲು 48 ಗಂಟೆ ತೆಗೆದುಕೊಂಡ ಇಂಡಿಗೋ ವಿಮಾನ !

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.24. ಕೆಲವೇ ಗಂಟೆಗಳಲ್ಲಿ ಬಹ್ರೇನ್‌ನಿಂದ ಮಂಗಳೂರಿಗೆ ಕ್ರಮಿಸಬೇಕಿದ್ದ ಇಂಡಿಗೋ ವಿಮಾನವೊಂದು ಇಲ್ಲಿಗೆ ಆಗಮಿಸಲು ಎರಡು ದಿನ ತೆಗೆದುಕೊಂಡ ಪ್ರಸಂಗ ಇತ್ತೀಚೆಗೆ ನಡೆದಿದೆ. ವಿಮಾನಯಾನ ಸಂಸ್ಥೆಯ ಈ ಕಳಪೆ ಸೇವೆಗೆ ವಿಮಾನದಲ್ಲಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ ಮತ್ತು ಬಹ್ರೈನ್‌ನಲ್ಲಿ ಎದುರಾದ ವಿವಿಧ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಯಾತನೆ ಅನುಭವಿಸಿದ್ದರು. ಬಹ್ರೈನ್‌ನಲ್ಲಿ ವಿಮಾನಕ್ಕೆ ಹಕ್ಕಿ ಹೊಡೆತದಿಂದಾಗಿ ಎರಡ ದಿನಗಳಷ್ಟು ತಡವಾಗಿ ವಿಮಾನ ಆಗಮಿಸಲು ಕಾರಣವಾಯಿತು. ಆದರೆ ಮಂಗಳೂರಿಗೆ ಬರಲು ಕಾದು ಕುಳಿತಿದ್ದ ಪ್ರಯಾಣಿಕರಿಗೆ ಕನಿಷ್ಠ ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆಯನ್ನೂ ಕಲ್ಪಿಸಿರಲಿಲ್ಲ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

Also Read  ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡನೀಯ ➤ ಬೆಳ್ತಂಗಡಿಯಲ್ಲಿ ಪಿಎಫ್ಐ ಪ್ರತಿಭಟನೆ

 

error: Content is protected !!
Scroll to Top