ದ.ಕ. ಜಿಲ್ಲೆಯಲ್ಲಿ 8 ಮತಗಟ್ಟೆಗಳ ಬದಲಾವಣೆಗೆ ಚುನಾವಣಾ ಆಯೋಗ ತೀರ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 24. ದಕ್ಷಿಣ ಕನ್ನಡ ಜಿಲ್ಲೆಯ 202 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 6 ಮತಗಟ್ಟೆಗಳು ಹಾಗೂ 205 ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2 ಮತಗಟ್ಟೆಗಳ ಬದಲಾವಣೆ ಮಾಡಲಾಗಿದ್ದು, ಕೇಂದ್ರ ಚುನಾವಣಾ ಆಯೋಗವು  ಅನುಮೋದನೆ ನೀಡಿದೆ.

202 ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕದ್ರಿಯಲ್ಲಿದ್ದ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 131, ಕಟ್ಟಡ ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಅದನ್ನು ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿಗೆ ಬದಲಾವಣೆ ಮಾಡಲಾಗಿದೆ. ಕದ್ರಿಯ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 132 ಅನ್ನು ಆ ಕಟ್ಟಡವು ಶಿಥಿಲಗೊಂಡ ಕಾರಣ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜ್ (ಮುಖ್ಯ ಕಟ್ಟಡದ ಮಧ್ಯಭಾಗದ ಎಡಬದಿ) ಗೆ ಬದಲಾವಣೆ ಮಾಡಲಾಗಿದೆ.

Also Read  ಬಂಟ್ವಾಳ: ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು..!

 

error: Content is protected !!
Scroll to Top