2ಗಂಟೆ ತಡವಾಗಿ ಬಂದು 12 ಪ್ರಯಾಣಿಕರನ್ನು ಬಿಟ್ಟು ತೆರಳಿದ ವಿಮಾನ ➤ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಮುಂಬೈ, ಮಾ. 23. ಬಹರೇನ್​ನಿಂದ ಮುಂಬೈಗೆ 2 ಗಂಟೆ ತಡವಾಗಿ ಆಗಮಿಸಿದ್ದ ವಿಮಾನವು ಮಂಗಳೂರಿನ ಪ್ರಯಾಣಿಕರನ್ನು ಮುಂಬೈನಲ್ಲಿ ಬಿಟ್ಟು ಹೋದ ಘಟನೆ ವರದಿಯಾಗಿದೆ.

ಬಹರೇನ್​ನಿಂದ ಮಂಗಳೂರಿಗೆ ಟಿಕೆಟ್ ಮಾಡಿದ್ದ ಪ್ರಯಾಣಿಕರು, ಮುಂಬೈ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿದೆ. ಬಹರೇನ್​ನಿಂದ ಮುಂಬೈಗೆ ಮುಂಜಾನೆ 5.30 ಕ್ಕೆ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನವು 7.30 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ. ಆದರೂ ಮುಂಬೈನಲ್ಲಿ ಕಾಯುತ್ತಿದ್ದ ಮಂಗಳೂರಿನ ಪ್ರಯಾಣಿಕರನ್ನು ಬಿಟ್ಟು ಹೋಗಿದೆ. ಇದರಿಂದ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದ್ದು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನವು ಬಹರೇನ್​ನಲ್ಲಿ ಓರ್ವ ಪ್ರಯಾಣಿಕನಿಗಾಗಿ ಎರಡು ಗಂಟೆ ಕಾದಿದ್ದು, ಹೀಗಾಗಿ ಮುಂಬೈ ನಿಲ್ದಾಣಕ್ಕೆ ತಡವಾಗಿ ಲ್ಯಾಂಡ್ ಆಗಿದೆ. ಅಲ್ಲದೇ ಮುಂಬೈನಿಂದ ಮಂಗಳೂರಿಗೆ ಹಾರಬೇಕಿದ್ದ ಇಂಡಿಗೋ ವಿಮಾನದ ಕನೆಕ್ಟಿಂಗ್ ಫ್ಲೈಟ್ ಮಂಗಳೂರಿನ ಪ್ರಯಾಣಿಕರನ್ನು ಬಿಟ್ಟು ಹಾರಿದೆ. 12 ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಅತಂತ್ರರಾಗಿದ್ದು ಇಂಡಿಗೋ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Also Read  ಲಾಕ್ ಡೌನ್ ‌ಉಲ್ಲಂಘಿಸುವವರ ವಿರುದ್ಧ ಮುಂದುವರಿದ ಕಾರ್ಯಾಚರಣೆ ➤ ಕಡಬದಲ್ಲಿ ಬೆಳ್ಳಂಬೆಳಗ್ಗೆ ಹಲವು ಕಾರುಗಳು ಪೊಲೀಸ್ ವಶಕ್ಕೆ

error: Content is protected !!
Scroll to Top