ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ

(ನ್ಯೂಸ್ ಕಡಬ) newskadaba.com.ನವದೆಹಲಿ, ಮಾ 22. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜದ ಮೇಲೆ ಸಹಿ ಹಾಕಿ ಟೀಕೆಗೆ ಗುರಿಯಾಗಿದ್ದಾರೆ.

ದೋಹಾದಲ್ಲಿ ನಡೆದ ಟಿ20 ಪಂದ್ಯಾವಳಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಆಕ್ಷನ್-ಪ್ಯಾಕ್ಡ್ ಸೀಸನ್‌ನಲ್ಲಿ ಅಭಿಮಾನಿಗಳ ಆಸೆಯನ್ನು ಪೂರೈಸುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇತ್ತೀಚೆಗೆ ಭಾರತೀಯ ಧ್ವಜದ ಮೇಲೆ ಅಭಿಮಾನಿಯೊಬ್ಬರಿಗೆ ತಮ್ಮ ಹಸ್ತಾಕ್ಷರವನ್ನು ನೀಡುತ್ತಿರುವುದು ಕಂಡುಬಂದಿದೆ.ಅಭಿಮಾನಿಯ ಮನವಿಗೆ ಸ್ಪಂದಿಸಿದ ಅಫ್ರಿದಿ ಅಭಿಮಾನಿಗೆ ಶುಭಾಶಯ ಕೋರಿದ್ದು, ಭಾರತದ ಧ್ವಜದ ಮೇಲೆ ತಮ್ಮ ಹಸ್ತಾಕ್ಷರವನ್ನೂ ನೀಡಿದ್ದಾರೆ.

Also Read  ಮಂಗಳಮುಖಿಗೆ  ಅವಾಚ್ಯ ಶಬ್ಧಗಳಿಂದು ಬೈದು ಹಲ್ಲೆ ಮಾಡಿದ ನಾಲ್ವರು ಅಪರಿಚಿತ ಯುವಕರು..!​ ➤ ದೂರು ದಾಖಲು

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನೆಟ್ಟಿಗರು ಭಾರತೀಯ ದ್ವಜ ಸಂಹಿತೆ ಪ್ರಕಾರ ರಾಷ್ಟ್ರಧ್ವಜದ ಮೇಲೆ ಏನನ್ನು ಬರೆಯಬಾರದು. ಆದರೆ ಈ ನಿಯಮ ಉಲ್ಲಂಘಿಸಿದ್ದಾರೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ ಧ್ವಜ ನೀಡಿದ ವ್ಯಕ್ತಿಯ ಮೇಲೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!
Scroll to Top