ಉಗ್ರರೊಂದಿಗೆ ಗುಂಡಿನ ಚಕಮಕಿ ➤ ಐಎಸ್‌ಐ ಟಾಪ್ ಬ್ರಿಗೇಡಿಯರ್ ಹತ್ಯೆ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.22. ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನದ ಅಂಗೂರ್ ಅಡ್ಡಾದಲ್ಲಿ ಹಾರ್ಡ್‌ಕೋರ್ ಭಯೋತ್ಪಾದಕರ ಜೊತೆಗಿನ ಎನ್‌ ಕೌಂಟರ್‌ ನಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ನ ಬ್ರಿಗೇಡಿಯರ್ ಮುಸ್ತಫಾ ಕಮಲ್ ಬಾರ್ಕಿ ಕೊಲ್ಲಲ್ಪಟ್ಟರು ಎಂದು ಪಾಕಿಸ್ತಾನ ಮಿಲಿಟರಿ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ತಿಳಿಸಿದೆ.

ಎರಡು ಕಡೆಯ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ ಎಂದು ISPR ಹೇಳಿಕೆಯಲ್ಲಿ ತಿಳಿಸಿದ್ದು, ಮುಂಭಾಗದಿಂದ ಎನ್‌ಕೌಂಟರ್ ಮುನ್ನಡೆಸುತ್ತಿರುವಾಗ ಬ್ರಿಗೇಡಿಯರ್ ಮುಸ್ತಫಾ ಕಮಾಲ್ ಬಾರ್ಕಿಯನ್ನು ಕೊಲ್ಲಲಾಗಿದೆ. 7 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

Also Read  ಆಂಬ್ಯುಲೆನ್ಸ್‌ ನಲ್ಲೇ 10 ನೇ ತರಗತಿ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿನಿ

 

error: Content is protected !!
Scroll to Top