(ನ್ಯೂಸ್ ಕಡಬ)newskadaba.com ಮಾ.22. ಯುಗಾದಿ ಚೈತ್ರ ಮಾಸದ ಮೊದಲ ದಿನವಾಗಿದೆ. ಯುಗಾದಿಯ ಎಂದರೆ ಯುಗದ ಆದಿ ಎಂದರ್ಥ. ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರೆ, ವ್ಯಾಪಾರಿಗಳು ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.
ವರ್ಷದ ಆರಂಭದ ಶುಭ ದಿನವಾದ ಯುಗಾದಿ ಹಿಂದೂ ಪಂಚಾಂಗದ ಪ್ರಥಮ ದಿವಸ. ಹಸಿರು ತೋರಣಗಳ ಅಲಂಕಾರ, ಬೇವು ಬೆಲ್ಲ ಮಿಶ್ರಣವನ್ನು ಹಂಚಿ ಸವಿಯುವ ಸಂಪ್ರದಾಯವಿದೆ.