ಬ್ರಹ್ಮಾವರ: ಅಕ್ರಮ ಅಕ್ಕಿ ಸಾಗಾಟ ➤ 5.7 ಲಕ್ಷ ರೂ. ಮೌಲ್ಯದ 220  ಚೀಲ ಪಡಿತರ ಅಕ್ಕಿ ವಶಕ್ಕೆ

(ನ್ಯೂಸ್ ಕಡಬ)newskadaba.com  ಬ್ರಹ್ಮಾವರ, ಮಾ.22. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬ್ರಹ್ಮಾವರ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್‌ಐ ಹಾಗೂ ಸಿಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ತಾಲೂಕು ಆಹಾರ ನಿರೀಕ್ಷಕರು 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಎಸ್‍ಪಿಗೆ ಪತ್ರ ಬರೆದ ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ➤ ಪತ್ರದಲ್ಲಿ ಏನಿದೆ ಗೋತ್ತೆ..?!

 

error: Content is protected !!
Scroll to Top