(ನ್ಯೂಸ್ ಕಡಬ)newskadaba.com ಲಕ್ನೋ, ಮಾ, 22. ಕಳೆದ ಕೆಲ ಸಮಯದಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶದ ಪ್ರಜೆಗಳನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಯುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆಗ್ರಾದ ತಾಜ್‌ಗಂಜ್ ಟೋರಾ ಚೌಕಿ ಪ್ರದೇಶದಲ್ಲಿ ಬಂಧಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಇವರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಇಬ್ರಾಹಿಂ ಶೇಖ್, ಮೊಹಮ್ಮದ್ ಅಜೀಜುರ್ ಗಾಜಿ, ರಾಜು ಶೇಖ್, ಜನ್ನತ್ ಬೇಗಂ ಮತ್ತು ಮುಕ್ತಾ ಶೇಖ್ ಬಂಧಿತರು ಎಂದು ಗುರುತಿಸಲಾಗಿದೆ.
ಇನ್ನು ನಕಲಿ ಆಧಾರ್ ಕಾರ್ಡ್‌ಗಳು, ಬಾಂಗ್ಲಾದೇಶದ ಪಾಸ್‌ಪೋರ್ಟ್‌ಗಳು, ರೈಲ್ವೇ ಟಿಕೆಟ್,ಮೊಬೈಲ್ ಫೋನ್ ಮತ್ತು ಬಾಂಗ್ಲಾದೇಶಿ ಐಡಿಗಳನ್ನು ಪೊಲೀಸರು ಬಂಧಿತರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
Also Read ಕೊರೊನಾ ಹವಾಳಿ ಮಧ್ಯೆ ಕೇಂದ್ರದಿಂದ ಖಡಕ್ ಸೂಚನೆ..! ➤'RT-PCR', ಬೂಸ್ಟರ್ ಡೋಸ್ ಪ್ರಮಾಣ ಹೆಚ್ಚಳಕ್ಕೆ ಸಲಹೆ