ಕೌಟುಂಬಿಕ ಕಲಹ ➤ಚಾಕುವಿನಿಂದ ಇರಿದು ಮೈದುನನ ಕೊಲೆ

(ನ್ಯೂಸ್ ಕಡಬ) newskadaba.com. ಕೋಲಾರ, ಮಾ 22. ನಗರದ ಬಂಬುಬಜಾರ್​ನಲ್ಲಿ ಫಯಾಜ್​ ಎಂಬುವನು ತನ್ನ ಹೆಂಡತಿಯ ತಂಗಿ ಗಂಡನ ಕೊಲೆ ಮಾಡಿದ್ದಾನೆ. ಜೊತೆಗೆ ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ‌ ಘಟನೆ ನಡೆದಿದೆ.

ಗಂಡ ಹೆಂಡತಿ ನಡುವಿನ ಗಲಾಟೆಯಲ್ಲಿ ಪ್ರಶ್ನೆ ಮಾಡಿದ ಹೆಂಡತಿಯ ತಂಗಿಯ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮತ್ತೋರ್ವ ಸಂಬಂಧಿಯ ಮೇಲೂ ಕೊಲೆ ಯತ್ನ ನಡೆಸಿದ್ದಾರೆ‌. ಇದೀಗ ಆರೋಪಿ ಫಯಾಸ್​ನನ್ನು ಗಲ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮೃತ ತಾಜ್, ಫಯಾಜ್​ನ ನಾದನಿಯನ್ನ ಮದುವೆಯಾಗಿದ್ದ.

ಫಯಾಜ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮೂರು ತಿಂಗಳ ಹಿಂದೆ ತವರು ಮನೆ ಸೇರಿಕೊಂಡಿದ್ದ ಫಯಾಜ್​ ಪತ್ನಿ ತಜ್ಜೂನ್ನೀಸಾಳೊಂದಿಗೆ ಮಧ್ಯಾಹ್ನ ಮಾತನಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಆಗ ಅಲ್ಲೇ ಇದ್ದ ತಾಜ್​ ಹಾಗೂ ಜಪ್ರುಲ್ಲಾ ಗಲಾಟೆ ಬಿಡಿಸಲು ಹೋಗಿದ್ದಾರೆ. ಈ ವೇಳೆ ಫಯಾಜ್​ ಏಕಾಏಕಿ ತಾಜ್​ಗೆ ಚಾಕುವಿನಿಂದ ಇರಿದಿದ್ದಾನೆ. ತಾಜ್​ ಸ್ಥಳದಲ್ಲೇ ಮೃತಪಟ್ಟರೆ, ಜೊತೆಗಿದ್ದ ಜಪ್ರುಲ್ಲ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳುವನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Also Read  ಅಕ್ರಮ ಮದ್ಯ ಶೇಖರಣೆ: ಓರ್ವ ಅರೆಸ್ಟ್..!

 

error: Content is protected !!
Scroll to Top