ಮಂಗಳೂರು: 12 ಮಂದಿ ಪತ್ರಕರ್ತರಿಗೆ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಘೋಷಣೆ

(ನ್ಯೂಸ್ ಕಡಬ)newskadaba.com ಮಂಗಳೂರ, ಮಾ.22. ಹಿರಿಯ ಪತ್ರಕರ್ತರಾದ ಬದ್ರುದ್ದೀನ್ ಕೆ. ಮಾಣಿ, ಹಂಝ ಮಲಾರ್ ಸಹಿತ 12 ಮಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ, ಕೇರಳದ ಎರ್ನಾಕುಲಂ ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಡಾ.ವೆಂಕಟೇಶ್ ತುಪ್ಪಿಲ್ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಗೆ ಬದ್ರುದ್ದೀನ್ ಕೆ.ಮಾಣಿ, ಹಾಸನದ ಜೆ.ಆರ್. ಕೆಂಚೇಗೌಡ ಅವರು ನೀಡುವ ‘ಪ್ರಚೋದಯ’ ದತ್ತಿನಿಧಿ ಪ್ರಶಸ್ತಿಗೆ ಹಂಝ ಮಲಾರ್ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Also Read  “ಜೀವನದಲ್ಲಿ ಗುರಿಯನ್ನು ಸಾಧಿಸುವ ಛಲದೊಂದಿಗೆ ಮುನ್ನಡೆಯಿರಿ“ ➤ ಡಾ. ಅಮಿತಾಬ್ ಆನಂದ್

 

error: Content is protected !!
Scroll to Top