(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಭಾರತದ ಪ್ರಜೆಯೆಂದು ಘೋಷಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ನಂತರ ಹುಟ್ಟೂರಾದ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಲು ಮುಂದಾಗಿದ್ದ ಮಹಿಳಾ ವೈದ್ಯರೊಬ್ಬರ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಅನಿವಾಸಿ ಭಾರತೀಯ ಅಥವಾ ಭಾರತದ ಸಾಗರೋತ್ತರ ನಾಗರಿಕ ಕೋಟಾದಡಿ ವಿಧಿಸುವ ಎಂಬಿಬಿಎಸ್ ಪದವಿಯ ಶುಲ್ಕ ಪಡೆದು ವಾಪಸ್ಸಾಗಲು ಮಹಿಳೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಮೆರಿಕಕ್ಕೆ ತೆರಳಲು ಎಕ್ಸಿಟ್ ಪರ್ಮಿಟ್ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಲಸೆ ಬ್ಯೂರೋ ಕ್ರಮ ಪ್ರಶ್ನಿಸಿ ಡಾ.ಭಾನು ಸಿ. ರಾಮಚಂದ್ರನ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.