ಮೊನ್ನೆಯಷ್ಟೇ ಗಂಡ-ಹೆಂಡತಿ ಕಾಲುಹಿಡಿದುಕೊಂಡಿದ್ದರು, ನಾವು ಎಲ್ಲೂ ಹೋಗಲ್ಲ ಎಂದಿದ್ದರು ➤ ಬಾಬುರಾವ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್ ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಎಂ ಎಲ್ ಸಿ ಬಾಬುರಾಮ್ ಚಿಂಚನಸೂರ ರಾಜೀನಾಮೆ ನೀಡಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ವೈ, ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡು, ನಾವು ಎಲ್ಲೂ ಹೋಗಲ್ಲ ಎಂದಿದ್ದರು. ಇಂದು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲೂ ಹೋಗಲ್ಲ ಎಂದು ಮೊನ್ನೆಯಷ್ಟೇ ಹೇಳಿದ್ದರು. ಈಗ ಚಿಂಚನಸೂರ ಪಕ್ಷ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದು ಪ್ರಶ್ನಿಸಿದರು. ಬೇರೆ ಬೇರೆ ಒತ್ತಡಕ್ಕೆ ಪಕ್ಷ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Also Read  ಇಂದು ಮರ್ಧಾಳ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಗರ್ಭಗುಡಿಯ ಶಂಕುಸ್ಥಾಪನೆ ಮತ್ತು ಶಿಲಾನ್ಯಾಸ

error: Content is protected !!
Scroll to Top