ಕೇಂದ್ರ ಸರ್ಕಾರದ ಸಾಲ 155 ಲಕ್ಷ ಕೋಟಿ ➤ ನಿರ್ಮಲಾ ಸೀತಾರಾಮನ್‌

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ (2023ರ ಮಾರ್ಚ್‌ 31) ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು ₹ 155.8 ಲಕ್ಷ ಕೋಟಿ (ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 57.3ರಷ್ಟು ) ಅಂದಾಜು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಒಟ್ಟು ಸಾಲದ ಮೊತ್ತದಲ್ಲಿ ವಿದೇಶಿ ಸಾಲದ ಮೊತ್ತವು ಸದ್ಯ ಇರುವ ವಿನಿಮಯ ದರದ ಆಧಾರದಲ್ಲಿ ₹ 7.03 ಲಕ್ಷ ಕೋಟಿ (ಜಿಡಿಪಿಯ ಶೇ 2.6) ಆಗಲಿದೆ ಎಂದು ಅವರು ಹೇಳಿದ್ದಾರೆ. ಒಟ್ಟು ಸಾಲದಲ್ಲಿ ವಿದೇಶಿ ಸಾಲದ ಪ್ರಮಾಣವು ಶೇ 4.5ರಷ್ಟು ಇದೆ ಎಂದು ಅವರು ಹೇಳಿದ್ದಾರೆ.

Also Read  ಮಂಗಳೂರು ವಿಮಾನ ದುರಂತ ➤ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಣೆ

 

error: Content is protected !!
Scroll to Top