ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ಮಾರ್ಚ್, 23 ರಂದು ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಮಾಜಿ ಯೋಧರು ಅನುಭವಿಸುತ್ತಿರುವ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಭೆ ನಡೆಯಲಿದೆ.

ಅಡ್ವೋಕೇಟ್ ಜನರಲ್ ಮತ್ತು ಸಮಾಜ ಸೇವಕರಾದ ಎಸ್.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಅವರು ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ವಿಚಾರ ವ್ಯಕ್ತಪಡಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-12 ಹಾಲಿ ಅಧ್ಯಕ್ಷರು, ಉದ್ಯಮಿ ಹಾಗೂ ಸಮಾಜ ಸೇವಕರಾದ ದೇಯಂಡ ಜಯಾಚಂಗಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

Also Read  ಕೆಎಸ್ಆರ್ಟಿಸಿ ಬಸ್ ಮತ್ತು ಆಟೋ ಢಿಕ್ಕಿ ➤ ನಾಲ್ಕುಮಂದಿ ದಾರುಣ ಸಾವು

 

error: Content is protected !!