(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ. 21. ವ್ಯಕ್ತಿಯೋರ್ವರು ಮಗಳ ಮದುವೆಗೆ ಚಿನ್ನ ಖರೀದಿಗೆ ತೆಗೆದುಕೊಂಡು ಹೋಗುತ್ತಿದ್ದ 10 ಲಕ್ಷವನ್ನು ದುಷ್ಕರ್ಮಿಯೋರ್ವ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಕಾಯರ್ಪಾಡಿ ನಿವಾಸಿ ಮೊಹಮ್ಮದ್ ಎಂಬವರು ತನ್ನ ಪತ್ನಿ ಜೊತೆ ತನ್ನ ಮಗಳ ವಿವಾಹಕ್ಕೆ ಚಿನ್ನ ಖರೀದಿಸಲೆಂದು ಉಪ್ಪಿನಂಗಡಿ ಪೇಟೆಗೆ ಹೋಗುವ ಉದ್ದೇಶದಿಂದ ಹಣವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಸ್ಕೂಟರ್ ನ ಢಿಕ್ಕಿಯಲ್ಲಿಟ್ಟು, ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಸ್ಕೂಟರ್ ನಿಂದ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿತ್ತು. ಈ ಸಂದರ್ಭ ಅಪರಿಚಿತನೋರ್ವ ಬಂದು ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆಂದು ಆರೋಪಿಸಲಾಗಿದೆ.
