ಅಕ್ರಮ ಮರಳು ದಂಧೆಕೋರರಿಂದ ಸ್ಕೂಟರ್ ಗೆ ಹಾನಿ  ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 21. ಇಲ್ಲಿಗೆ ಸಮೀಪದ ಉದ್ಯಾವರ ಮಠದಕುದ್ರು ಪಾಪನಾಶಿನಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಅದಮಾರು ಮಠದ ಸ್ವಾಮೀಜಿಯವರು ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ನಿವಾಸಿ ಭಾಸ್ಕರ್ ಕರ್ಕೇರಾ ಎಂಬವರ ಸ್ಕೂಟರ್‌ನ್ನು ದುಷ್ಕರ್ಮಿಗಳು ಹಾನಿಗೈದಿರುವ ಕುರಿತು ವರದಿಯಾಗಿದೆ.

ಭಾಸ್ಕರ್ ಅವರು ಅದಮಾರು ಶ್ರೀಗಳ ಮರಳು ಮಾಫಿಯಾದ ವಿರುದ್ದ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವೇಳೆ ತಮ್ಮ ಮನೆಯ ಸಮೀಪ ನಿಲ್ಲಿಸಿದ್ದ ಸ್ಕೂಟರನ್ನು ಯಾರೋ ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Also Read  ಸವಣೂರು: ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ

 

error: Content is protected !!
Scroll to Top