ಆಪರೇಷನ್ ಸನ್ ಸೆಟ್ ವಿಶೇಷ ಅಭಿಯಾನ ಆರಂಭ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 21. ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟು ನಿಟ್ಟಿನಲ್ಲಿ ಇಡಲು ಹಾಗೂ ಸಮಾಜ ಘಾತುಕ ಶಕ್ತಿಗಳ ವಿರುದ್ದ ಹದ್ದಿನಕಣ್ಣು ಇಡಲು ಉಡುಪಿ ಪೊಲೀಸರು ಆಪರೇಷನ್ ಸನ್ ಸೆಟ್ ಎಂಬ ವಿಶೇಷ ಅಭಿಯಾನ ಪ್ರಾರಂಭಿಸಿದ್ದಾರೆ.


ಉಡುಪಿ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ‘ ಆಪರೇಷನ್ ಸನ್‌ಸೆಟ್ ’ ವಿಶೇಷ ಅಭಿಯಾನ ನಡೆಸಿದರು. ಇದರ ಅಂಗವಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಮಾಡಿ ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ನಡೆಸಲಾಯಿತು.

Also Read  ಬಂಟ್ವಾಳ: KSRTC ಬಸ್ ಮತ್ತು ಬೈಕ್ ಢಿಕ್ಕಿ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top