ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ20.  ಸಿಲಿಕಾನ್‌ ಸಿಟಿಯಲ್ಲಿ ದಿನ ಖತರ್ನಾಕ್‌ ಕಳ್ಳರು ಹೆಚ್ಚಾಗುತ್ತಿದ್ದು, ಅದಲ್ಲೂ ಕಣ್ಣೆದುರಲ್ಲೇ ಗ್ರಾಹಕರ ಕಣ್ಣಿಗೆ ಖದೀಮರು ಮಣ್ಣೆರಚುತ್ತಿರೋ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ರಿಮೋಟ್ ಕಂಟ್ರೋಲ್‌ ಮೂಲಕ ತೂಕದಲ್ಲೂ ವಂಚನೆಗೆ ಮುಂದಾಗಿರುವ ಘಟನೆ ವರದಿಯಾಗಿದೆ.

ಇದೀಗ ನಗರದ ಪ್ರಮುಖವಾಗಿ ನ್ಯಾಯಬೆಲೆ ಅಂಗಡಿ, ಗುಜರಿ, ಮಾಂಸದ ಅಂಗಡಿಗಳಲ್ಲಿ ಹೊಸ ಕಳ್ಳಾಟ ಶುರುವಾಗಿದ್ದು, ಪಿಸಿಬಿ ಚಿಪ್ ಅಳವಡಿಸಿಕೊಂಡು‌ ರಿಮೋಟ್ ಮೂಲಕ ತೂಕದ ಸ್ಕೇಲ್ ಕಂಟ್ರೋಲ್ ಮಾಡುತ್ತಾ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಕಂಡ ಬಂದಿದೆ. ಈ ಮೂಲಕ ತೂಕದ ಸ್ಕೇಲ್ ನಲ್ಲಿ ಭಾರೀ ಅವ್ಯವಹಾರ ಮಾಡಿ ಲಾಭ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Also Read  ಬಂಧನದ ಭೀತಿ ಆಸ್ಪತ್ರೆಗೆ ದಾಖಲಾದ ಇನ್ಸ್​​ಪೆಕ್ಟರ್ ಪ್ರವೀಣ್..! 

ನ್ಯಾಯಬೆಲೆ ಅಂಗಡಿಯಿಂದ ಹಿಡಿದು ಚಿಕ್ಕಪುಟ್ಟ ಅಂಗಡಿಗಳಲ್ಲಿ ರಿಮೋಟ್​​​ ಮೂಲಕ ತೂಕದ ಸ್ಕೇಲ್​​ ಕಂಟ್ರೋಲ್​ ಮಾಡಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಘಟನೆಯ ಬಗ್ಗೆಪಶ್ಚಿ ಮವಿಭಾಗದ ಡಿಸಿಪಿ ಲಕ್ಷ್ಮಣ ಬಿ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರಮುಖವಾಗಿ 15 ಅಂಗಡಿಗಳಲ್ಲಿ ನಮ್ಮ ಪೊಲೀಸರು ದಾಳಿ ಮಾಡಿ ವಂಚನೆ ಮಾಡುತ್ತಿದ್ದನ್ನು ಪತ್ತೆಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಬಂಧಿತರಾದ 17 ಜನರ ಪೈಕಿ ನವೀನ್ ಎಂಬಾತ ಯೂಟ್ಯೂಬ್ ನೋಡಿ ತೂಕದ ಯಂತ್ರದಲ್ಲಿ ವೈಯರ್ ಬದಲಾವಣೆ ಮಾಡುವುದನ್ನು ಕಲಿತುಕೊಂಡಿದ್ದನಂತೆ ಎಂದು ಬೆಳಕಿಗೆ ಬಂದಿದೆ.

error: Content is protected !!
Scroll to Top