ಜಿಂಕೆ ಬೇಟೆ ➤ಓರ್ವ ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com. ಹನೂರು, ಮಾ20. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.  ಜಲ್ಲಿಪಾಳ್ಯದ ಮಾರುಶೆಟ್ಟಿ ಬಂಧಿತ ಆರೋಪಿ. ಈ ವೇಳೆ ಈತನ ಜೊತೆಗಿದ್ದ ಮೂರ್ತಿ, ರಾಮು ಎಂಬವರು ಪರಾರಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೂಗ್ಯಂ ವನ್ಯಜೀವಿ ವಲಯದ ಪಾಲಾರ್ ಹಳ್ಳದಲ್ಲಿ ಜಿಂಕೆ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಮಾರುಶೆಟ್ಟಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆಗಾರರಾದ ಮೂರ್ತಿ, ರಾಮು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 8 ಕೆ.ಜಿ ಜಿಂಕೆ ಮಾಂಸ, ಒಂದು ಕೊಂಬು, ಉರುಳು ಹಾಗೂ ಜಿಂಕೆಯನ್ನು ಬೇಟೆಯಾಡಲು ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

error: Content is protected !!
Scroll to Top