ತರಬೇತಿ ವಿಮಾನ ಪತನ ➤ ಇಬ್ಬರು ಪೈಲಟ್ ಗಳು ಮೃತ್ಯು

(ನ್ಯೂಸ್ ಕಡಬ) newskadaba.com ಭೋಪಾಲ್, ಮಾ. 19. ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‌‌ಗಳು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿದೆ.


ಮೃತಪಟ್ಟವರನ್ನು ಹಿಮಾಚಲ ಪ್ರದೇಶದ ಕ್ಯಾಪ್ಟನ್ ಮೋಹಿತ್ ಠಾಕೂರ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಗುಜರಾಥ್‌ನ ವಿ.ಮಹೇಶ್ವರಿ ಎಂದು ಗುರುತಿಸಲಾಗಿದೆ. ನ್ಯಾಷನಲ್ ಫ್ಲೈಯಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಗೆ ಸೇರಿದ ಡೈಮಂಡ್ ಡಿಎ-40 ತರಬೇತಿ ವಿಮಾನ ಮಹಾರಷ್ಟ್ರದ ಗೋಂದಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ಸುಮಾರು 40 ಕಿಲೋಮೀಟರ್ ದೂರದ ಬಾಲಾಘಾಟ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.

Also Read  ಗೋಹತ್ಯೆ ನಿಷೇಧ ಕಾಯ್ದೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮಂಡನೆ ➤ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್

error: Content is protected !!
Scroll to Top