(ನ್ಯೂಸ್ ಕಡಬ) newskadaba.com ಕಾಪು, ಮಾ. 19. ಎರಡು ಬಸ್ಸುಗಳ ನಡುವಿನ ಓವರ್ ಟೇಕ್ ಭರದಲ್ಲಿ ಬಸ್ಸೊಂದು ಡಿವೈಡರ್ ಮೇಲೇರಿದ ಘಟನೆ ಉಚ್ಚಿಲ ಸಮಿಪದ ಮೂಲೂರು ವೆಸ್ಟ್‌ಕೋಸ್ಟ್ ನರ್ಸರಿ ಬಳಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುವ ಒಂದೇ ಹೆಸರಿನ ಎರಡು ಬಸ್ಸುಗಳು ಓವರ್ ಟೇಕ್ ಮಾಡಿಕೊಂಡು ಬಂದು ಮೂಳೂರು ಬಳಿ ಸರ್ವಿಸ್ ರಸ್ತೆಯ ಪಕ್ಕದ ಡಿವೈಡರ್ ಮೇಲೇರಿದೆ. ಇನ್ನು ಈ ಘಟನೆಯಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Also Read ಕಡಬ, ಪುತ್ತೂರು, ಸುಳ್ಯ ವ್ಯಾಪ್ತಿಯಲ್ಲಿ ಕೊರೋನಾ ಇಳಿಕೆ ➤ 24 ಗಂಟೆಗಳಲ್ಲಿ 158 ಮಂದಿಗೆ ಕೊರೋನಾ ಪಾಸಿಟಿವ್