ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ➤ ನಟಿ ಸಖತ್ ಟ್ರೋಲ್

(ನ್ಯೂಸ್ ಕಡಬ) newskadaba.com.ಮುಂಬೈ, ಮಾ.18. ಇತ್ತೀಚಿಗಷ್ಟೇ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನರಾಗಿದ್ದರು. ತಾಯಿ ಕಳೆದುಕೊಂಡ ದುಃಖದಲ್ಲಿ ನಟಿ ಭಾವುಕ ಪೋಸ್ಟ್ ಮಾಡಿದ್ರು. ಇದೀಗ ಕೊನೆ ಕಾರ್ಯದ ವೇಳೆ ಲಿಪ್​ಸ್ಟಿಕ್ ಧರಿಸಿದ್ದ ಫೋಟೋಗಳು ವೈರಲ್ ಆಗಿದೆ.

ತಾಯಿಯ ಸಾವು ಮಾಧುರಿ ದೀಕ್ಷಿತ್ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿದೆ. ತಾಯಿ ಬಗ್ಗೆ ಮಾಧುರಿ ದೀಕ್ಷಿತ್ ಭಾವುಕ ವಿದಾಯ ಹೇಳಿದ್ರು. ಆದ್ರೆ ಅಂತ್ಯಕ್ರಿಯೆ ವೇಳೆ ಮಾಧುರಿ ದೀಕ್ಷಿತ್ ವೈಟ್ ಸಲ್ವಾರ್ ಧರಿಸಿ, ಲಿಪ್ ಸ್ಟಿಕ್ ಹಾಕಿ ಬಂದಿದ್ದು, ಇದೀಗ ನಟಿ ಮಾಧುರಿ ಟ್ರೋಲ್ ಆಗಿದ್ದಾರೆ. ತಾಯಿಯ ಸಾವಿನಿಂದ ಮಾಧುರಿ ದೀಕ್ಷಿತ್ ಮತ್ತು ಅವರ ಕುಟುಂಬ ದುಃಖಿತವಾಗಿದೆ. ಮಾಧುರಿ ದೀಕ್ಷಿತ್ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದರು. ಮಾಧುರಿ ಪ್ರತಿಯೊಂದು ಸಣ್ಣ, ಸಣ್ಣ ವಿಷಯವನ್ನು ಸಹ ತನ್ನ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಸ್ನೇಹಲತಾ ದೀಕ್ಷಿತ್ ಅವರ ಜೊತೆಗಿನ ಪ್ರತಿ ಫೋಟೋವನ್ನು ಸಹ ನಟಿ ಮಾಧುರಿ ದೀಕ್ಷಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ರು. ಮಾಧುರಿ ದೀಕ್ಷಿತ್ ಹಾಗೂ ಸ್ನೇಹಲತಾ ನಡುವೆ ಉತ್ತಮ ಬಾಂಧವ್ಯ ಇತ್ತು.

Also Read  ಜಮ್ಮುವಿನ ಸೇನಾ ಶಿಬಿರದಲ್ಲಿ ಯೋಧನ ನಿಗೂಢ ಸಾವು..! ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಭಾರತೀಯ ಸೇನೆ ಶಂಕೆ   

ಇತ್ತೀಚಿಗಷ್ಟೇ ಸ್ನೇಹಲತಾ ದೀಕ್ಷಿತ್ 91ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ್ರು. ಈ ಸಂತಾಪ ಕಾರ್ಯಕ್ರಮದ ವೇಳೆ ಮಾಧುರಿ ಕುಟುಂಬದೊಂದಿಗೆ ಉದ್ಯಮದ ಅನೇಕರು ಭಾಗವಹಿಸಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

error: Content is protected !!
Scroll to Top