ಭಾರತದಲ್ಲೇ ಮೊದಲ ಬಾರಿಗೆ ಎರಡು ತೋಳುಗಳ ಕಸಿ ಯಶಸ್ವಿ

(ನ್ಯೂಸ್ ಕಡಬ) newskadaba.com ಜೈಪುರ, ಮಾ. 18. ಎರಡೂ ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡಿರುವ ಘಟನೆ ವರದಿಯಾಗಿದ್ದು, ಇದು ಏಷ್ಯಾದಲ್ಲೇ ಮೊದಲಾಗಿದೆ.

ರಾಜಸ್ಥಾನದ ಅಜ್ಮೀರ್‌ ಮೂಲದ ಪ್ರೇಮಾ ರಾಮ್(33) ಎಂಬವರು ಎರಡೂ ತೋಳುಗಳ ಕಸಿಗೆ ಒಳಗಾದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದು, ಸತತ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ ರಾಮ್‌ ಅವರಿಗೆ ವಿದ್ಯುತ್‌ ಶಾಕ್ ತಗುಲಿ ಎರಡೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಾಗಳಾಗಿ, ಜೀವ ಉಳಿಯಬೇಕಾದರೆ ಕೈಗಳನ್ನು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಇದಾದ ಬಳಿಕ ಕುಟುಂಬದವರ ಬೆಂಬಲದಿಂದ ಕೈಗಳು ಮಾಡಬೇಕಾದ ಕಾರ್ಯವನ್ನು ಕಾಲುಗಳಿಂದಲೇ ಮಾಡಲು ಪ್ರೇಮಾ ರಾಮ್‌ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇನ್ನು ಹತ್ತಕ್ಕೂ ಹೆಚ್ಚಿನ ವರ್ಷದ ಬಳಿಕ ಇದೀಗ ಯಶಸ್ವಿಯಾಗಿ ಪ್ರೇಮಾ ರಾಮ್‌ ಎರಡೂ ತೋಳುಗಳ ಕಸಿ ಮಾಡಿಸಿಕೊಂಡಿದ್ದಾರೆ.

Also Read  10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ➤ ಸಹಾಯಕ್ಕಾಗಿ ಗೂಗಲ್ ಸರ್ಚ್.?!

error: Content is protected !!
Scroll to Top