ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಮಗುವನ್ನು ಬಳಸಿಕೊಂಡ ತಂದೆ.!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 18. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನಿಂದ 90 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಮಾರ್ಚ್ 1 ರಿಂದ ಮಾರ್ಚ್ 15 ರ ಅವಧಿಯಲ್ಲಿ ಮೂವರು ಪ್ರಯಾಣಿಕರಿಂದ ಅಧಿಕಾರಿಗಳು 90 ಲಕ್ಷದ 67 ಸಾವಿರದ 750 ರೂ. ಮೌಲ್ಯದ 1,606 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ವಿವಿಧ ವಿಧಾನಗಳಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಮತ್ತೊಂದು ಪ್ರಕರಣದಲ್ಲಿ 21 ತಿಂಗಳ ಹೆಣ್ಣು ಮಗುವಿನ ಡೈಪರ್ ನಲ್ಲಿ ತಂದೆ ಚಿನ್ನವನ್ನು ಮರೆಮಾಚಿ ಡೈಪರ್ ಗೆ ತೊಡಿಸಿ ಅದರಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಪೌಚ್ ನಲ್ಲಿ ಇರಿಸಿದ್ದ. ಮತ್ತೋರ್ವ ಗುದ ನಾಳದಲ್ಲಿ ಮಾತ್ರೆಗಳ ರೂಪದಲ್ಲಿ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

Also Read  '170-180 ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಸಂಜೆ ಬಿಡುಗಡೆ' ➤ ಬಿಎಸ್ ಯಡಿಯೂರಪ್ಪ

error: Content is protected !!
Scroll to Top