(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ ಮುನ್ಸೂಚನೆ ನೀಡುತ್ತೆ.
ನಿಮ್ಮ ಕೂದಲು ವಯಸ್ಸಿಗಿಂತ ಮೊದಲೇ ಹೆಚ್ಚು ಬೆಳ್ಳಗಾಗಿದ್ದರೆ ನಿಮಗೆ ಹೃದಯ ಸಂಬಂಧಿ ಖಾಯಿಲೆ ಕಾಡಲಿದೆ ಎಂದೇ ಅರ್ಥ. ಅಧ್ಯಯನವೊಂದು ಈ ವಿಷ್ಯವನ್ನು ಹೇಳಿದೆ. ಕೂದಲು ಬೆಳ್ಳಗಾಗುವ ಮೂಲಕ ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಅಪಧಮನಿ ಕಾಠಿಣ್ಯ (ಹೃದಯದ ಸುತ್ತಮುತ್ತಲಿರುವ ರಕ್ತದ ಪ್ರಮಾಣ ಕಡಿಮೆಯಾಗುವುದು) ಕಾಡುತ್ತದೆ. ಇದರಿಂದ ಡಿ ಎನ್ ಎ ದುರ್ಬಲಗೊಳ್ಳುತ್ತದೆ. ಆಕ್ಸಿಡೇಟಿವ್ ಒತ್ತಡ, ಉರಿಯೂತ, ಹಾರ್ಮೋನ್ ನಲ್ಲಿ ಬದಲಾವಣೆ ಕಂಡುಬರುವ ಜೊತೆಗೆ ಕೂದಲು ಬೆಳ್ಳಗಾಗುತ್ತದೆ ಎಂದು ತಿಳಿದು ಬಂದಿದೆ.