(ನ್ಯೂಸ್ ಕಡಬ) newskadaba.com ರಾಮನಗರ, ಮಾ. 18. ಕಳೆದ ವಾರ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದ ಬೆಂಗಳೂರು-ಮೈಸೂರಿನ ದಶಪಥ ಹೆದ್ದಾರಿ ಸಣ್ಣ ಮಳೆಗೆ ಕೆರೆಯಂತಾಗಿದೆ.
ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನಗಳು ಕೆಟ್ಟು ನಿಂತಿದ್ದು ಹಿಂದೆಯಿಂದ ಬಂದ ವಾಹನಗಳು ಡಿಕ್ಕಿಯಾಗಿ ಸರಣಿ ಅಪಘಾತ ಸಂಭಸಿವೆ. ಇದರಿಂದ ಸವಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.