ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ..!

(ನ್ಯೂಸ್ ಕಡಬ)newskadaba.com  ಲಕ್ನೋ, ಮಾ.17. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದ ಅಪರಾಧಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ವ್ಯಕ್ತಿಯು 9 ವರ್ಷದ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ.

ಗಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆ ನಡೆದ ಸುಮಾರು 6 ತಿಂಗಳ ನಂತರ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302 (ಮರಣದಂಡನೆ), 363 (ಅಪಹರಣ) ಮತ್ತು 376 (ಅತ್ಯಾಚಾರ) ರ ಅಡಿಯಲ್ಲಿ ಶಿಕ್ಷೆ ವಿಧಿಸಿದೆ ಎಂದು ಗಾಜಿಯಾಬಾದ್ ಗ್ರಾಮಂತರದ ಡಿಸಿಪಿ ರವಿ ಕುಮಾರ್ ಹೇಳಿದ್ದಾರೆ.

Also Read  ದಕ್ಷಿಣ ಕನ್ನಡ  : ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ    ➤  ಸಹಕಾರಿ ಸಂಘದ ಸಿಬ್ಬಂದಿಗೆ ಗೂಸಾ ನೀಡಿದ ಗ್ರಾಹಕರು                               

 

 

error: Content is protected !!
Scroll to Top