ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ ➤ ದಂತ ವೈದ್ಯನ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ದಂತ ವೈದ್ಯನ ವಿರುದ್ದ ನರ್ಸ್ ಓರ್ವರು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ನಗರದ ಖಾಸಗಿ ಆಸ್ಪತ್ರೆಯೊಂದರ ನರ್ಸ್ ಗೆ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಫೈನಲ್ ಡಿಗ್ರಿ ಓದುತ್ತಿದ್ದ ಕೇರಳ ಮೂಲದ ದಂತ ವೈದ್ಯ ನ ಪರಿಚಯವಾಗಿತ್ತು. ಬಳಿಕ ಆತ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಆಕೆ ಗರ್ಭವತಿಯಾದಾಗ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೀಗ ವಂಚನೆಗೊಳಗಾದ ನರ್ಸ್ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಆರೋಪಿ ದಂತ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತ್ಯು!

error: Content is protected !!
Scroll to Top