ದಾಸ್ತಾನು ಮಳಿಗೆ ಮೇಲೆ ಸಿಸಿಬಿ ದಾಳಿ  ➤ 450 ಚೀಲ ಅಕ್ಕಿ, 5 ಲಕ್ಷ ಹಣ ವಶಕ್ಕೆ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಮಾ. 17. ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರೆಂಬ ಆರೋಪಕ್ಕೆ ಸಂಬಂಧಿಸಿ ನಗರದ ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 450 ಚೀಲ ಹಾಗೂ 5 ಲಕ್ಷ ನಗದು ಹಾಗೂ 4 ವಾಹನಗಳನ್ನು ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.

ಈ ಕುರಿತಂತೆ ಖಚಿತ ಮಾಹಿತಿಯ ಮೇರೆಗೆ ಎಸಿಪಿ ನಾರಾಯಣ ಹಾಗೂ ಬರಮನಿ ನೇತೃತ್ವದ ತಂಡವು ದಾಳಿ ನಡೆಸಿದೆ ಎನ್ನಲಾಗಿದೆ. ಸರ್ಕಾರದಿಂದ ಉಚಿತವಾಗಿ ನೀಡುವ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿ ಎಂಬಾತ 10 ರಿಂದ 15 ರೂ ಕೊಟ್ಟು ಖರೀದಿ ಮಾಡಿ, ನಂತರ ಅದನ್ನು 35 ರಿಂದ 40 ಬೆಲೆಗೆ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

Also Read  ನಾಳೆ ಸಂವಿಧಾನ ದಿನಾಚರಣೆ, ಎಲ್ಲ ಶಾಲಾ-ಕಾಲೇಜು, ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ

 

error: Content is protected !!
Scroll to Top