ಜೂಜು ಅಡ್ಡೆಯ ಮೇಲೆ ಪೊಲೀಸ್ ದಾಳಿ ➤ 21 ಆರೋಪಿಗಳು ಅರೆಸ್ಟ್      

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 17. ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಕೇಂದ್ರ ವಲಯ ಪೊಲೀಸರು 21 ಜನರನ್ನು ಬಂಧಿಸಿ, 25.15 ಲಕ್ಷ ನಗದು ವಶಪಡಿಸಿಕೊಂಡ ಘಟನೆ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಎಂಬಲ್ಲಿ ನಡೆದಿದೆ.

ಕೆಂದ್ರ ವಲಯದ ಐ.ಜಿ.ಪಿ ರವಿಕಾಂತೇಗೌಡ ಆದೇಶದ ಮೇರೆಗೆ ಕೇಂದ್ರ ವಲಯ ಅಪರಾಧ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ ಕೆ .ಪಾಟೀಲ್ ಅವರ ತಂಡ ತ್ಯಾಮಗೊಂಡ್ಲು ಹೋಬಳಿ ಇಸುವನಹಳ್ಳಿ ಮಾವಿನ ತೋಟದಲ್ಲಿ ಸುಮಾರು 20 ರಿಂದ 30 ಮಂದಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

Also Read  ಭೂಮಿಯಂತಿರುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದ ಖಗೋಳಶಾಸ್ತ್ರಜ್ಞರು.!

 

error: Content is protected !!
Scroll to Top