ಪುರುಷರ ವ್ಯಕ್ತಿತ್ವ ರೂಪಿಸುವುದು ಮಹಿಳೆಯೇ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 17.  ಉಳ್ಳಾಲ ಘಟಕ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ  ಅಂಗವಾಗಿ ಗೃಹರಕ್ಷಕಿಯರಾದ ಶ್ರೀಮತಿ ರೇಖಾ ಮೆಟಲ್ ಸಂಖ್ಯೆ 148, ಶ್ರೀಮತಿ ರೇಖಾ ಮೆಟಲ್ ಸಂಖ್ಯೆ 842 ಇವರಿಗೆ ಶಾಲು ಹೊದಿಸಿ, ಹಾರಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು.  ಗಂಡನ ಯಶಸ್ಸಿಗೆ ಹೆಂಡತಿ ಅನಿವಾರ್ಯ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀ ಅಗತ್ಯ.  ಹೀಗೆ ಒಬ್ಬ ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ ಪುರುಷರ ವ್ಯಕ್ತಿತ್ವ ರೂಪಿಸುವಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ ಎಂದು ನುಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್, ಹಿರಿಯ ಗೃಹರಕ್ಷಕರಾದ ಸುನಿಲ್, ಸವೆರಾ ಡಿಸೋಜಾ, ಖಾಲಿದ್, ಹಮೀದ್, ಸುರೇಂದ್ರ, ಸಂತೋಷ್, ಶ್ರವಣ್, ಜೀವನ್, ಸೆಲೆಸ್ಟಿನ್, ದಿವ್ಯಾ ಹಾಗೂ ಖತೀಜಮ್ಮ ಮೊದಲಾದವರು ಉಪಸ್ಥಿತರಿದ್ದರು.

Also Read  ಜಿಲ್ಲೆಯ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ► ಎಸ್ಪಿ ಸುಧೀರ್ ಕುಮಾರ್ ರೆಡ್ಡಿ

error: Content is protected !!
Scroll to Top