(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮಾ.18ರ ಶನಿವಾರ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಮಂಗಳೂರು ತಾಲೂಕಿನ ಕೊಂಪದವು, ಮುನ್ನೂರು, ಮುಲ್ಕಿ ತಾಲೂಕಿನ ಕಟೀಲು, ಮೂಡಬಿದ್ರೆ ತಾಲೂಕಿನ ವಾಲ್ಪಾಡಿ, ಪುತ್ತೂರು ತಾಲೂಕಿನ ಅರಿಯಡ್ಕ, ಸುಳ್ಯ ತಾಲೂಕಿನ ಕನಕಮಜಲು, ಕಡಬ ತಾಲೂಕಿನ ಕೊಯಿಲ, ಶಿರಾಡಿ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಕಾವಳಪಡೂರು, ವಿಟ್ಲಮುಡ್ನೂರು, ಬೆಳ್ತಂಗಡಿ ತಾಲೂಕಿನ ನಡ, ಮಿತ್ತಬಾಗಿಲು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ನಾಳೆ (ಮಾ.18) ಕೊಯಿಲದಲ್ಲಿ ವಿದ್ಯುತ್ ಅದಾಲತ್
