(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ಇಲ್ಲಿನ ಮಹಾನಗರ ಪಾಲಿಕೆಯ ಬೋಳೂರು ಸ್ಮಶಾನದಲ್ಲಿ ಕಟ್ಟಿಗೆ ಮೂಲಕ ಶವದಹನ ಮಾಡುವ ಕಟ್ಟಡದ ದುರಸ್ತಿ ಕಾಮಗಾರಿಯು ಮಾ.17 ರಿಂದ 30ರವರೆಗೆ ನಡೆಯಲಿರುವ ಕಾರಣ ಅಲ್ಲಿ ತಾತ್ಕಾಲಿಕವಾಗಿ ಶವದಹನ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಅದೇ ಸ್ಮಶಾನದಲ್ಲಿ ಲಭ್ಯವಿರುವ ವಿದ್ಯುತ್ ಮೂಲಕ ಶವದಹನ ಸೇವೆಯನ್ನು ಬಳಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಕಟ್ಟಡ ದುರಸ್ತಿ ಕಾಮಗಾರಿ ಹಿನ್ನೆಲೆ ➤ ತಾತ್ಕಾಲಿಕವಾಗಿ ದಹನ ಕಾರ್ಯ ಸ್ಥಗಿತ
