(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 17. ದುಬೈ ಮತ್ತು ಅಬುದಾಬಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 1,08,28,240 ರೂ.ಮೌಲ್ಯದ 1,913 ಗ್ರಾಂ. ಅಕ್ರಮ ಚಿನ್ನ ಸಾಗಾಟವನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ. ಆರೋಪಿಗಳು ಚಿನ್ನವನ್ನು ಪೇಸ್ಟ್ ಮಾಡಿ ಟಿ ಶರ್ಟ್ ನಲ್ಲಿ ಅಳವಡಿಸಿ, ಗುದದ್ವಾರದಲ್ಲಿ ಅಡಗಿಸಿಟ್ಟು ಸಾಗಾಟ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು: 1.8 ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ
