ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇಂಜಿನಿಯರ್ ಗೆ 4 ವರ್ಷ ಜೈಲುಶಿಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 16. ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮುಲ್ಕಿ ನಗರ ಪಂಚಾಯತ್ ಜೂನಿಯರ್ ಇಂಜಿನಿಯರ್ ಪದ್ಮನಾಭ ಎನ್ .ಕೆ. ಇವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 26 ಲಕ್ಷದ ಐವತ್ತು ಸಾವಿರ ರೂ. ದಂಡ ಕಟ್ಟಲು ಆದೇಶಿಸಿ ನಗರದ ಮೂರನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಆದೇಶ ನೀಡಿದೆ.

ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಸಂಪಾದಿಸಿದ್ದ ಪದ್ಮನಾಭ್, ದಾಳಿ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ನ್ಯಾಯಾಧೀಶ ಬಿ.ಬಿ.ಜಕಾತಿ ಅಂತಿಮ ತೀರ್ಪು ನೀಡಿದ್ದಾರೆ.

Also Read  ಲಾಕ್ ಡೌನ್ ಉಲ್ಲಂಘಿಸಿದ ವಾಹನ ಮಾಲಿಕರಿಗೆ ಬಿಗ್ ಶಾಕ್ ➤ ಬೆಳ್ಳಂಬೆಳಗ್ಗೆ ಕಡಬ ಪೊಲೀಸರಿಂದ ಹಲವು ವಾಹನಗಳ ಸೀಝ್

error: Content is protected !!
Scroll to Top