ಮಧ್ಯರಾತ್ರಿಯಿಂದ ಕರೆನೀಡಿದ್ದ ಮುಷ್ಕರವನ್ನು ಕೈಬಿಟ್ಟ ಲಾರಿ ಮಾಲಕರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 16. ನಗರದಲ್ಲಿ 7.50 ಟನ್ ತೂಕದವರೆಗಿನ ವಾಹನಗಳ ಸಂಚಾರಕ್ಕೆ ಅವಕಾಶ ಸಿಕ್ಕಿದ್ದು, ಲಾರಿ ಮಾಲೀಕರು ಹಾಗೂ ಏಜೆಂಟರು ತಾವು ಕರೆ ನೀಡಿದ್ದ ಮುಷ್ಕರವನ್ನು ಕೈ ಬಿಟ್ಟಿದ್ದಾರೆ.

ನಗರದಲ್ಲಿ ನಿತ್ಯವೂ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4ರಿಂದ 8 ಗಂಟೆಯವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದನ್ನು ಖಂಡಿಸಿದ್ದ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘವು ಮಾರ್ಚ್ 16ರ ತಡರಾತ್ರಿಯಿಂದ ಮುಷ್ಕರಕ್ಕೆ ಕರೆ ನೀಡಿತ್ತು.

Also Read  ಸ್ಥಳೀಯಾಡಳಿತ ಉಪಚುನಾವಣೆ ► ವಿಜಯ ಪತಾಕೆ ಹಾರಿಸಿದ ಜೆಡಿಎಸ್ - ಕಾಂಗ್ರೆಸ್, ಬಿಜೆಪಿಗೆ ತೀವ್ರ ಮುಖಭಂಗ

error: Content is protected !!
Scroll to Top