ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಬೃಹತ್ ದರಕಡಿತದ ತರಕಾರಿ ಮೇಳ ► ಟೊಮ್ಯಾಟೊ, ಸಾಂಬಾರ್ ಸೌತೆ 05 ರೂ. ಉಳಿದಂತೆ ತರಕಾರಿಗಳಿಗೆ 10 ರೂ.

(ನ್ಯೂಸ್ ಕಡಬ) newskadaba.com ಕಡಬ, ಜ.05. ಟೊಮ್ಯಾಟೊ, ಸಾಂಬಾರ್ ಸೌತೆ ಕಿಲೋವೊಂದಕ್ಕೆ 05 ರೂ. ಉಳಿದ ತರಕಾರಿಗಳಿಗೆ 10 ರೂ. ನಂತೆ ದರ ನಿಗದಿಪಡಿಸಲಾಗಿದೆ. ಇದು ಎಲ್ಲೋ ಘಟ್ಟ ಪ್ರದೇಶದಲ್ಲಿನ ತರಕಾರಿಗಳ ದರ ಪಟ್ಟಿ ಎಂದು ಭಾವಿಸಬೇಡಿ.

ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಭಾರೀ ದರಕಡಿತದ ತರಕಾರಿ ಮೇಳ ಜನವರಿ 05 ಶುಕ್ರವಾರದಿಂದ ನಡೆಯಲಿದೆ. ಈ ಮೇಳದಲ್ಲಿ ಲೋಡು ಲೋಡು ತರಕಾರಿಗಳನ್ನು ನೇರವಾಗಿ ಬೆಳೆಗಾರರ ಕೈಯಿಂದ ತರಿಸಿಕೊಂಡು ಗ್ರಾಹಕರಿಗೆ ನೀಡಲಾಗುತ್ತದೆ. ಉಳಿದಂತೆ ತರಕಾರಿಗಳಾದ ಬಟಾಟೆ, ಮೂಲಂಗಿ, ನವಿಲುಕೋಸು, ಕುಂಬಳಕಾಯಿ, ಮುಳ್ಳುಸೌತೆ, ಸುರೆ, ಬದನೆ, ಸೀಮೆ ಬದನೆ, ಚೀನಿ ಕಾಯಿ, ಕ್ಯಾಬೇಜ್ ಗಳು ಕಿಲೋವೊಂದಕ್ಕೆ 10 ರೂ. ನಂತೆ ದರ ನಿಗದಿಪಡಿಸಲಾಗಿದೆ. ಕಾಯಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಕಟ್ಟುಗಳಿಗೆ 10 ರೂ‌‌.ಗಳು ಹಾಗೂ ಬೀನ್ಸ್ ಕಟ್ಟೊಂದಕ್ಕೆ 20 ರೂ. ಹಾಗೂ ಕ್ವಾಲಿಫ್ಲವರ್ ಒಂದಕ್ಕೆ 20 ರೂಪಾಯಿ ದರ ನಿಗದಿಪಡಿಸಲಾಗಿದೆ.

Also Read  ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ|ದೇವಿ ಪ್ರಸಾದ್ ಕಾನತ್ತೂರು ಆಯ್ಕೆ

ಇಂತಹ ತರಕಾರಿ ಮೇಳವನ್ನು 2017 ರಲ್ಲಿ ಆಯೋಜಿಸಿ ಕಡಬ ಮಾತ್ರವಲ್ಲದೆ ಸುಬ್ರಹ್ಮಣ್ಯ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ಬಿಳಿನೆಲೆ, ಕುಂತೂರು ಪರಿಸರದ ಗ್ರಾಹಕರು ತರಕಾರಿ ಖರೀದಿಸಲು ಮುಗಿಬಿದ್ದಿದ್ದರು. ಇದೀಗ ಜನವರಿ 05 ಶುಕ್ರವಾರದಿಂದ ಬೃಹತ್ ದರ ಕಡಿತದ ತರಕಾರಿ ಮೇಳ ನಡೆಯಲಿದೆ. ಗ್ರಾಹಕರು ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಯಶೋದಾ ಜನರಲ್ ಸ್ಟೋರ್‌ನ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top