ಹಾಲು ಕುಡಿಯುವಾಗ ನವಜಾತ ಶಿಶು ಉಸಿರುಗಟ್ಟಿ ಮೃತ್ಯು➤ ದುಃಖದಲ್ಲಿ ಹಿರಿಯ ಮಗನೊಂದಿಗೆ ಬಾವಿಗೆ ಹಾರಿದ ತಾಯಿ

(ನ್ಯೂಸ್ ಕಡಬ) newskadaba.com. ತಿರುವನಂತಪುರಂ. ಮಾ 16.  7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಾಠಲ್ ನಲ್ಲಿ ಮಾ.16 ರಂದು ನಡೆದಿದೆ.

ತಾಯಿ ಲಿಜಿ (38) ಮತ್ತು ಆಕೆಯ ಮಗ ಬೆನ್ ಟಾಮ್ (7) ಮೃತರು. ಒಂದು ದಿನದ ಹಿಂದೆಯಷ್ಟೇ ಲಿಜಿ ಅವರ 28 ದಿನದ ನವಜಾತ ಶಿಶು ಹಾಲು ಕುಡಿಯುವಾಗ ಉಸಿರುಗಟ್ಟಿ ಮೃತಪಟ್ಟಿತ್ತು. ಅದೇ ದುಃಖದಲ್ಲಿ ಮೌನವಾಗಿಯೇ ಇದ್ದ ಲಿಜಿ ತನ್ನ ಮನೆಯವರು ಗುರುವಾರ ಚರ್ಚ್‌ ಗೆಂದು ಹೋಗುವಾಗ, ಲಿಜಿ ಹಾಗೂ ಮಗ ಇಬ್ಬರು ಚರ್ಚ್‌ಗೆ ಹೋಗದೆ ಮನೆಯಲ್ಲೇ ಇದ್ದರು. ಮನೆಯವರು ಚರ್ಚ್‌ ನಿಂದ ವಾಪಾಸ್‌ ಬರುವಾಗ ಮನೆಯಲ್ಲಿ ಲಿಜಿ ಹಾಗೂ ಬೆನ್‌ ಟಾಮ್‌ ಇಲ್ಲದಿರುವುದನ್ನು ನೋಡಿದ್ದಾರೆ. ಎಲ್ಲೆಡೆ ಹುಡುಕಿದಾಗ ಕೊನೆಗೆ ಬಾವಿಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಲಿಜಿ ಅವರ ಹಿರಿಯ ಮಗ ಬೆನ್‌ ಟಾಮ್‌ ಅವರಿಗೆ ಹೃದಯರೋಗದ ಸಮಸ್ಯೆ ಇತ್ತು ಎಂದು ತಿಳಿದು ಬಂದಿದೆ.

Also Read  ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ

error: Content is protected !!
Scroll to Top