(ನ್ಯೂಸ್ ಕಡಬ) newskadaba.com.ಮಂಗಳೂರು. ಮಾ 16. ಬೇಸಿಗೆಯಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅವುಗಳಲ್ಲಿ ಹಲಸು ಕೂಡಾ ಒಂದು. ಹಲಸಿನ ಹಣ್ಣು ಇಷ್ಟಪಡದವರು ಬಹಳ ಕಡಿಮೆ. ಈ ಋತುವಿನಲ್ಲಿ ಸಿಗುವ ಆರೋಗ್ಯಕರ ಹಣ್ಣುಗಳಲ್ಲಿ ಇದು ಒಂದಾಗಿದೆ.
ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶವಿದೆ. ಇದು ಅನೇಕ ರೀತಿಯ ಕ್ಯಾರೊಟಿನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಹಾಗಾಗಿ ಈ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು :
- ಮಲಬದ್ಧತೆಗೆ ಹಲಸು ಪ್ರಯೋಜನಕಾರಿ :
ಹಲಸು ಫೈಬರ್‌ನ ಉತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ ಮಲಬದ್ಧತೆಯ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ಕರುಳಿನ ಚಲನೆಯನ್ನು ಕ್ರಮಬದ್ಧವಾಗಿಡಲು ಇದು ಸಹಕಾರಿಯಾಗಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
- ಮಧುಮೇಹದಲ್ಲಿ ಹಲಸು ಪ್ರಯೋಜನಕಾರಿ :
ದೇಹವು ಹಲಸಿನ ಹಣ್ಣನ್ನು ಹೆಚ್ಚು ನಿಧಾನವಾಗಿ ಜೀರ್ಣಿಸಿಕೊಳ್ಳುತ್ತದೆ. ಇದು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅಂದರೆ, ಹಲಸಿನ ಹಣ್ಣು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವುದರ ಜೊತೆಗೆ ಸಕ್ಕರೆ ಅಂಶ ಏರಿಕೆಯಾಗದಂತೆ ತಡೆಯುತ್ತದೆ.
- ಹೈ ಬಿಪಿಯಲ್ಲಿ ಪ್ರಯೋಜನಕಾರಿ ಹಲಸು :
ಹೈ ಬಿಪಿ ರೋಗಿಗಳಿಗೆ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಪೊಟ್ಯಾಸಿಯಂ ಸಮೃದ್ಧವಾಗಿರುವ ಹಲಸು ನಿಮ್ಮ ರಕ್ತನಾಳಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ.
ಹಲವು ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಈ ಹಣ್ಣು ಒಂದು ವರದಾನಕ್ಕೆ ಸಮಾನ!
4. ಅಲ್ಸರ್ ಆಗಿದ್ದರೆ ಹಲಸು ತಿನ್ನಿ :
ಹಲಸಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅಲ್ಸರ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಯಿಯ ಹುಣ್ಣುಗಳನ್ನು ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತಾರೆ. ಇದರೊಂದಿಗೆ ಹೊಟ್ಟೆಯ ಪಿಹೆಚ್ ಸಮತೋಲನದಲ್ಲಿಡಲು ಈ ಹಣ್ಣು ಸಹಕಾರಿ.