ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ ʻಕಬ್ಜʼ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.16. ‘ಕಬ್ಜ’ ಸಿನಿಮಾ ಕ್ರಿಯೇಟ್‌ ಮಾಡಿರುವ ಕ್ರೇಜ್‌ ಅಷ್ಟಿಷ್ಟಲ್ಲ. ಮೂವರು ಸೂಪರ್‌ ಸ್ಟಾರ್‌ಗಳನ್ನು ಹಾಕಿಕೊಂಡು ಆರ್‌. ಚಂದ್ರು ಈ ಸಿನಿಮಾ ಮಾಡಿದ್ದಾರೆ. ಇನ್ನೇನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕಬ್ಜ ತೆರೆಮೇಲೆ ಅಬ್ಬರಿಸಿ ಬೊಬ್ಬಿರಿಯಲಿದೆ.

ನಾಳೆ ಅಂದರೆ ಮಾರ್ಚ್ 17 ರಂದು ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಿಲೀಸ್‌ಗೂ ಮುನ್ನವೇ ಕಬ್ಜ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಸುಮಾರು 4,000 ಚಿತ್ರಮಂದಿರಗಳಲ್ಲಿ ಪ್ಯಾನ್-ಇಂಡಿಯಾ ಚಿತ್ರವನ್ನು ಬಿಡುಗಡೆ ಮಾಡಲು ತಯಾರಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Also Read  ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ- ಗುಂಡು ಹಾರಾಟ ➤ ನಾಲ್ವರು ಮೃತ್ಯು, ಮೂವರು ಗಂಭೀರ

 

error: Content is protected !!
Scroll to Top