ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ➤ 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತ…!

(ನ್ಯೂಸ್ ಕಡಬ)newskadaba.com ದಾವಣಗೆರೆ, ಮಾ.16. ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ NFSA ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುವುದರೊಂದಿಗೆ ರಾಜ್ಯ ಸರ್ಕಾರದ ವೆಚ್ಚದಲ್ಲಿ 1 ಕೆ. ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ.

ಅಂಗಡಿಗಳಲ್ಲಿ ಅಂತ್ಯೋದಯ ಪ್ರತಿ ಕಾರ್ಡುದಾರರಿಗೆ ಹಾಗು ಬಿ. ಪಿ. ಎಲ್ ಕಾರ್ಡುದಾರರಿಗೆ ತಲಾ 7 ಕೆ. ಜಿ ಅಕ್ಕಿ ಮತ್ತು ಒಪ್ಪಿಗೆ ನೀಡಿದೆ. ಎ. ಪಿ. ಎಲ್ ಪಡಿತರ ಚೀಟಿದಾರರಿಗೆ 15 ರೂಗಳಂತೆ 10 ಕೆ. ಜಿಯ ವರೆಗೆ ಪಡಿತರ ನೀಡಲಾಗುತ್ತದೆ.

Also Read  ಇಂದು(ಆ. 29) ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

ಪಡಿತರ ಚೀಟಿದಾರರು ಅಂತರ್ ರಾಜ್ಯ / ಜಿಲ್ಲೆಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯಲು ಅವಕಾಶ ಕಲ್ಪಿಸಿದ್ದು , ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ವಿಳಾಸ ನೀಡಿದ ತಕ್ಷಣ ರಶೀದಿ ಪಡೆದು ಅದರಂತೆ ಆಹಾರ ಧಾನ್ಯಗಳನ್ನು ಪಡೆಯಬೇಕು ಎಂದು ದಾವಣಗೆರೆ ತಾಲೂಕು ತಹಶೀಲ್ದಾರ್ ತಿಳಿಸಿದ್ದಾರೆ.

 

 

error: Content is protected !!
Scroll to Top